Aarohana
ಆರೋಹಣ - ಸ್ಪಷ್ಟ ಸೂಕ್ಷ್ಮ ಸುರೂಪ.., ಜೀವನದ ನಾಗಾಲೋಟದಲ್ಲಿ ಗಳಿಸಿದ ಹೆಸರು, ಯಶಸ್ಸು, ಸಾಧನೆ ಯಾವುದೋ ತಿರುವಲ್ಲಿ ನಮ್ಮನ್ನು ಒಂಟಿಯಾಗಿಸಿ ಬಿಡುತ್ತದೆ. ನಾವು ಮಾಡೋ ಪ್ರತಿ ವಿಷಯದಲ್ಲೂ ಹೇಳೋಕೆ ಆಗದ ನಿರಾಸಕ್ತಿ. ನಾವೇ ಮೆಚ್ಚಿದ ಜೀವನಾನೋ, ಸಂಗಾತಿಯೋ, ಕೆಲಸಾನೋ ಇವತ್ತು ಹೊರೆ ಅನ್ಸಿರುತ್ತೆ. ಬಿದ್ದು, ಎದ್ದೋ., ಸೋತು, ಗೆದ್ದೋ., ಜೀವನದ ಬಂಡಿ ಅದೇ ಉರಿಪಿನಲ್ಲಿ ಸಾಗಿಸ ಬೇಕು ನೋಡಿ, ಅದಕ್ಕೆ ನಿಮ್ಮ ಮನದಾಳದ ಆಡದ ಮಾತಿಗೆ, ಏರದ ಪದಗಳಿಗೆ, ಬರಹ ಹಾಗೂ ಸ್ವರದ ರೂಪ ನೀಡಿ., ಮಂದಗತಿಯ, ದಣಿದ ಜೀವನಕ್ಕೆ ಉತ್ಸಾಹ ತುಂಬಿ, ಒಂದ್ ಚಿಕ್ಕ ಶುರು ಕೊಡೋ, ಹಂಬಲದ ಉತ್ಸಾಹಿ ಯುವತಂಡ. ನಿಮ್ಮ ಭಾವದ ಸ್ವರ ನಾವು, ನಿಮ್ಮ ಕುಂಚದ ಬಣ್ಣ ನಾವು, ನೀವು ತೊರೆದ ಮನೆಯ ನೆನಪು ನಾವು, ನೀವು ಕಂಡ ಉಜ್ವಲ ನಾಳೆಯ ಹೊಳಪು ನಾವು.